ನಿವೇದಿತಾ ಗೌಡಾರಾ ಕಾನ್ಫಿಡೆನ್ಸ್ ನೋಡಿ ಎಲ್ಲರೂ ಬೆರಗಾಗಿ ಹೋದರು | Filmibeat Kannada

2018-01-12 1,813

Bigg Boss Kannada Season 5 : Niveditha Gowda who entered Bigg House as common contestant & she was the youngest contestant in Bigg Boss History. Few were under estimated Niveditha Gowda as she is Young. But Niveditha Gowda proved herself that she is not young & she is strong in Yesterday's task. Watch Video to know more.


'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗೆ ಕೊಟ್ಟಿರುವಷ್ಟೇ ಪ್ರಾಮುಖ್ಯತೆಯನ್ನು ಕಾಮನ್ ಮ್ಯಾನ್ ಗಳಿಗೆ ನೀಡಲಾಗಿದೆ. ಅದೇ ರೀತಿ ಕಾಮನ್ ಮ್ಯಾನ್ ವಿಭಾಗದಲ್ಲಿ ಆಯ್ಕೆ ಆದ ನಿವೇದಿತಾ ಗೌಡ ಈಗ ಸೆಲೆಬ್ರಿಟಿಗಳನ್ನು ಮೀರಿಸುವ ಮಟ್ಟಕ್ಕೆ ಜನಪ್ರಿಯತೆ ಗಳಿಸಿದ್ದಾರೆ.ನಿವೇದಿತಾ ಇನ್ನೂ ಚಿಕ್ಕವಳು, ಪುಟ್ಟ ಹುಡುಗಿ ಎಂಬ ಭಾವನೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಲ್ಲಿದೆ. ಆದ್ರೆ, ''ನಿವೇದಿತಾ ಗೌಡ ಮಗು ಅಲ್ಲ. ಆಕೆ ಕನ್ನಿಂಗ್ (ಕುತಂತ್ರಿ). ನಯಾ ಪೈಸೆ ಕೆಲಸ ಮಾಡಲ್ಲ'' ಎಂದು ಆಶಿತಾ ಚಂದ್ರಪ್ಪ, ಕೃಷಿ ತಾಪಂಡ ಹಾಗೂ ತೇಜಸ್ವಿನಿ ಆರೋಪ ಮಾಡಿದ್ದರು.'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರಿಗೂ 'ಬೊಂಬೆ' ನಿವೇದಿತಾ ಗೌಡ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರಂತೆ. ಹಾಗಂತ ಕಾಮೆಂಟ್ ಮಾಡಿದವರು ಬೇರಾರೂ ಅಲ್ಲ, 'ಕಿರಿಕ್' ಬೆಡಗಿ ಸಂಯುಕ್ತ ಹೆಗ್ಡೆ. ಇನ್ನು ಇದೀಗ ನೆನ್ನೆಯ ಟಾಸ್ಕ್ ನಲ್ಲಿ ನಿವೇದಿತಾ ಗೌಡ ಯಾರಿಗೂ ಕಮ್ಮಿ ಇಲ್ಲಾ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಈ ವಿಡಿಯೋ ನೋಡಿ.